ಮನಸ್ಸು
ಇದು ವಿವಿಧ ಮನಸುಗಳ ಭಾವನಾ ಚಿತ್ತಾರ
Monday, 16 April 2012
ಕಾಣುವ ದೃಷ್ಟಿಕೋನ ಇದ್ದಲ್ಲಿ.........
ದ್ವೇಷ ಮರೆತು ಬದುಕಿ
ಮನಸ್ಸು ಬಗ್ಗಡವಾಗದಿರಲಿ
ಬೆನ್ನು ಹತ್ತುವ ಜನ್ಮಾಂತರದ ವಾಸನೆಗಳು
Sunday, 15 April 2012
ಅಂತ:ಕರಣದ ಅಂತರಾಳ
Tuesday, 31 January 2012
ಗರ್ಭಿಣಿಯರಿಗೆ ಅನುಕೂಲಕರ ಮಾಹಿತಿಯುಳ್ಳ ಡಾ. ಜಯಲಕ್ಷ್ಮಿ ಅವರ ಸಂದರ್ಶನದ ಮೂಲಕ ಪ್ರಜಾವಾಣಿಯಲ್ಲಿ ಈ ಹಿಂದೆ ಪ್ರಕಟವಾದ ಅವರ ಲೇಖನಗಳು
ಲೇಖನಗಳ PDF ಪ್ರತಿಗಾಗಿ ಕೆಳಗಿನ ಲಿಂಕ್ ಗಳನ್ನು ಒತ್ತಿ
ಹೆರಿಗೆ ನೋವು ಬಂದಾಗ ಏನು ಮಾಡಬೇಕು ಶ್ ಸಿಸೇರಿಯನ್ ಆಗುತ್ತಿದೆ
ಹೆರಿಗೆಯಾಗುತ್ತದೆ.
ಮಧ್ಯಪಾನ ಮಗುವಿಗೆ ಮಾರಕವೇ
ಹೆರಿಗೆಯ ನಂತರದ ದಿನಗಳು.
ಅಧ್ಬುತ ಅಂಗ ಗರ್ಭಾಶಯ
ಹೆರಿಗೆಗೆ ಅಡ್ಮಿಟ್ ಮಾಡಿಯಾಯಿತು.
ನೋವಿಲ್ಲದೇ ಹೆರಿಗೆಯೇ.
ಸಿಸೇರಿಯನ್ ತಡೆಗಟ್ಟಬಹುದೇ ಭಾಗ 1.
ಹೆರಿಗೆ ಹೀಗಿದ್ದರೆ ಚೆನ್ನ
ಮಾಸುವಿನ ಕಾರ್ಯವೇನು
ಗರ್ಭಿಣಿಯರು ಕಾಫಿ ಕುಡಿಯಬಹುದೇ
ಬ್ರೀಚ್ ಎಂದರೇನು
ಸಿಸೇರಿಯನ್ ತಡೆಗಟ್ಟಬಹುದೇ ಭಾಗ 2
ಹೊಟ್ಟೆಯೊಳಗೇ ಮಗು ಸಾಯುವುದೇಕೆ
ಹೆರಿಗೆಯ ನೋವು ಆರಂಭವಾದಾಗ.
ಗರ್ಭಾವಸ್ಥೆ ಹಾಗೂ ಮಧುಮೇಹ.
ಗರ್ಭಿಣಿಯರಿಗೆ ಕಾಡದಿರಲಿ ರಕ್ತಹೀನತೆ
ಸಿಸೇರಿಯನ್ ತಡೆಗಟ್ಟಬಹುದೇ ಭಾಗ 3.
ಅಕಾಲಪ್ರಸವ ಎಂದರೇನು
ಸಿಸೇರಿಯನ್ ನಂತರದ ದಿನಗಳು
ಜಲಗರ್ಭ ಎಂದರೇನು
ಉಲ್ಬಣದ್ರವ ಎಂದರೇನು
ಏನಿದು ಆಮ್ನಿಯೋ ಸೆಂಟಿಸಿಸ್
ಬಿಟ್ಟು ಬಿಟ್ಟು ಬರುವ ನೋವು
ಮಗುವಿನ ಸುತ್ತ ನೀರಿರುವುದೇಕೆ
ಸುರಕ್ಷಿತವಾಗಿರಲಿ ಹೆಮ್ಮೆಯ ತಾಯ್ತನ
ಸಿಸೇರಿಯನ್ ನಂತರದ ಮಾನಸಿಕ ತುಮುಲಗಳು.
ಹೆರಿಗೆ ಹೇಗೆ
ಲೇಖನ ಕೃಪೆ : ಡಾ.ಜಯಲಕ್ಷ್ಮಿ ಮತ್ತು ಪ್ರಕಟಣೆ ಕೃಪೆ: ಪ್ರಜಾವಾಣಿ
ಸಂಗ್ರಾಹಕರು : ಮನಸ್ಸು
Sunday, 29 January 2012
ತೊನ್ನು ರೋಗಿಗಳನ್ನು ಊತರೆ ಮಳೆ ಬರುವುದಿಲ್ಲ ನಿಜವೇ?
ಇಲ್ಲ ಇದು ಸಂಪೂರ್ಣ ತಪ್ಪು ಅಭಿಪ್ರಾಯ. ತೊನ್ನು ರೋಗಿಗಳಲ್ಲಿ ಚರ್ಮಕ್ಕೆ ಬಣ್ಣ ಕೊಡುವಂತಹ ಮೆಲನಿನ್ ನ ಅಂಶವು ರಕ್ತದಲ್ಲಿ ಕಡಿಮೆ ಇರುವುದರಿಂದ ಚರ್ಮದ ಬಣ್ಣ ಬಿಳುಪಾಗುತ್ತ ಹೋಗುತ್ತದೆ. ಇದಕ್ಕೂ ಮಳೆಯಲ್ಲಿನ ಏರುಪೇರುಗಳಿಗೂ ಯಾವುದೇ ಸಂಬಂಧವಿಲ್ಲ.
ಇಲ್ಲ ಇದು ಸಂಪೂರ್ಣ ತಪ್ಪು ಅಭಿಪ್ರಾಯ. ತೊನ್ನು ರೋಗಿಗಳಲ್ಲಿ ಚರ್ಮಕ್ಕೆ ಬಣ್ಣ ಕೊಡುವಂತಹ ಮೆಲನಿನ್ ನ ಅಂಶವು ರಕ್ತದಲ್ಲಿ ಕಡಿಮೆ ಇರುವುದರಿಂದ ಚರ್ಮದ ಬಣ್ಣ ಬಿಳುಪಾಗುತ್ತ ಹೋಗುತ್ತದೆ. ಇದಕ್ಕೂ ಮಳೆಯಲ್ಲಿನ ಏರುಪೇರುಗಳಿಗೂ ಯಾವುದೇ ಸಂಬಂಧವಿಲ್ಲ.
Saturday, 21 January 2012
ತೊನ್ನು ರೋಗಿಗಳೊಂದಿಗೆ ಬೆರೆತರೆ ಆ ರೋಗ ನಮಗೂ ಹರಡುತ್ತದೆ . ನಿಜವೇ? ಸಗಣಿಯಿಂದ ಮನೆಯ ಮುಂದೆ ಸಾರಿಸುವುದೇಕೆ?, ಮನೆಯ ಮುಂದೆ ತುಳಸಿಯನ್ನು ಬೆಳೆಸಿ ದೇವರೆಂದು ಏಕೆ ಪೂಜಿಸುತ್ತಾರೆ?, ಕೊಳ್ಳಿ ದೆವ್ವಗಳಿರುವುದು ನಿಜವೇ? ಅಶ್ವತ್ಠಕಟ್ಟೆ ಸುತ್ತುವುದು ಮೂಢನಂಬಿಕೆಯೇ?, ಸ್ನಾನ ಮಾಡದೇ ಯಾವುದೇ ಕರ್ಮಗಳನ್ನು ಮಾಡಬಾರದೆಂದಿದೆ. ನಿಜವೇ?, ಧೂಪ ಹಾಕುವುದು ಏಕೆ? ಇದು ಒಳ್ಳೆಯದೇ?
1. ತೊನ್ನು ರೋಗಿಗಳೊಂದಿಗೆ ಬೆರೆತರೆ ಆ ರೋಗ ನಮಗೂ ಹರಡುತ್ತದೆ. ನಿಜವೇ?
ಇಲ್ಲ ಇದು ಸಂಪೂರ್ಣ ತಪ್ಪು ಅಭಿಪ್ರಾಯ. ತೊನ್ನು ಎಂಬುದೊಂದು ರೋಗವೇ ಅಲ್ಲ. ಸಾಮಾನ್ಯವಾಗಿ ನಮ್ಮ ಚರ್ಮಕ್ಕೆ ವಿವಿಧ ಬಣ್ಣಗಳಿರುವುದನ್ನು ನಾವು ನೋಡಿದ್ದೇವೆ. ಈ ರೀತಿ ಚರ್ಮಕ್ಕೆ ಬಣ್ಣ ಬರಲು ರಕ್ತದಲ್ಲಿರುವ ಮೆಲನಿನ್ ಎಂಬ ಅಂಶವೇ ಕಾರಣ. ಯಾರ ರಕ್ತದಲ್ಲಿ ಈ ಮೆಲನಿನ್ ಎಂಬ ಅಂಶದ ಕೊರತೆ ಕಾಣುತ್ತದೆಯೋ ಅಂತಹವರ ಚರ್ಮ ಬಿಳಿಯ ಬಣ್ನಕ್ಕೆ ತಿರುಗುತ್ತದೆ. ಕೆಲವರು ಇದನ್ನು ಕುಷ್ಟ ರೋಗ ಎಂದೂ ಸಹ ತಪ್ಪಾಗಿ ಭಾವಿಸುತ್ತಾರೆ. ತೊನ್ನು ರೋಗಿಗಳೊಂದಿಗೆ ಬೆರೆಯುವುದರಿಂದ ಇತರೆ ಆರೋಗ್ಯವಂತರಿಗೆ ಯಾವುದೇ ತೊಂದರೆ ಇಲ್ಲ.
2. ಸಗಣಿಯಿಂದ ಮನೆಯ ಮುಂದೆ ಸಾರಿಸುವುದೇಕೆ?
ಸಗಣಿಯಲ್ಲಿ ಮಾನವನ ದೇಹದ ಮೇಲೆ ದುಷ್ಪರಿಣಾಮ ಬೀರುವಂತಹ ಹಲವಾರು ಬ್ಯಾಕ್ಟೀರಿಯಾಗಳನ್ನು, ಹಾಗೂ ಮನೆಯೊಳಗೆ ಪ್ರವೇಶಿಸುವ ಹಲವಾರು ವಿಷ ಕ್ರಿಮಿಗಳನ್ನು ತಡೆಯುವಂತಹ ಬ್ಯಾಕ್ಟೀರಿಯಾ ನಿರೋಧಕ
ಅಂಶವಿರುತ್ತದೆ. ಆದ್ದರಿಂದ ಮನೆಯ ಮುಂದೆ ಸಗಣಿಯಿಂದ ಸಾರಿಸಿದರೆ ಆ ಮನೆಯವರ ಆರೋಗ್ಯಕ್ಕೆ ಒಳ್ಳೆಯದು.
3. ಮನೆಯ ಮುಂದೆ ತುಳಸಿಯನ್ನು ಬೆಳೆಸಿ ದೇವರೆಂದು ಏಕೆ ಪೂಜಿಸುತ್ತಾರೆ?
ತುಳಸಿಗೆ ಆದ್ಯಾತ್ಮಿಕವಾಗಿ ಹಾಗೂ ವೈಜ್ಞಾನಿಕವಾಗಿ ಅತ್ಯಂತ ಮಹತ್ವವಿದ್ದು ಅವುಗಳನ್ನು ಕೆಳಗಿನಂತೆ ವಿವರಿಸಬಹುದು.
ಆದ್ಯಾತ್ಮಿಕವಾಗಿ ತುಳಸಿ
ತುಳಸಿ ರಾಕ್ಷಸ ಜಲಂಧರನ ಹೆಂಡತಿಯಾಗಿದ್ದು, (ವೃಂದ ಎಂಬುದು ಆಕೆಯ ಆಗಿನ ಹೆಸರು) ಅತ್ಯುತ್ತಮ ಪತಿವ್ರತೆಯಾಗಿರುತ್ತ್ತಾಳೆ. ಈಕೆಯ ತಪೋಶಕ್ತಿಯಿಂದ ಜಲಂಧರನ ಬಲವು ಅಧಿಕವಾಗುತ್ತಿರುತ್ತದೆ. ಇದರಿಂದ ಕಂಗಾಲಾದ ಶ್ರೀ ವಿಷ್ಣುವು ಜಲಂಧರನ ವೇಷದಲ್ಲಿ ಬಂದು ವೃಂದಳ ತಪೋಭಂಗ ಮಾಡುತ್ತಾನೆ ಮತ್ತು ಜಲಂಧರನನ್ನು ಮಣಿಸಿ ಕೊಲ್ಲುತ್ತಾನೆ. ಇದರಿಂದ ಕುಪಿತಳಾದ ವೃಂದ ವಿಷ್ಣುವಿಗೆ ಶಾಪವಿತ್ತು ಪತಿಯೊಂದಿಗೆ ಸಹಗಮನ ಹೊಂದುತ್ತಾಳೆ. ಆ ವೃಂದಳೇ ತುಳಸಿಯಾಗಿ ಪಾರ್ವತಿ ನಿರ್ಮಿಸಿದ ಬೃಂದಾವನದಲ್ಲಿ ಜನಿಸಿದಳೆಂದು ಆಕೆಯನ್ನು ಭಕ್ತಿ ಭಾವಗಳಿಂದ ಪ್ಜಿಸಲಾಗುತ್ತದೆ.
ವೈಜ್ಞಾನಿಕವಾಗಿ ತುಳಸಿ
ವೈಜ್ಞಾನಿಕವಾಗಿ ತುಳಸಿಗೆ ಬಹಳ ಮಹತ್ವವಿದ್ದು, ಅದನ್ನು ಕೆಳಗಿನಂತೆ ಕಾಣಬಹುದು.
ವಾತಾವರಣದಲ್ಲಿನ ಸೊಳ್ಳೆಗಳ ಪ್ರಮಾಣ ಕಡಿಮೆಯಾಗಲು, ಪ್ಲೂ ಜ್ವರದ ನಿಯಂತ್ರಣಕ್ಕೆ, ಗಂಟಲಿನ ಸಮಸ್ಯೆಗಳ ನಿವಾರಣೆಗೆ, ರಕ್ತದ ಶುದ್ಧೀಕರಣಕ್ಕಾಗಿ, ಒಣಗಿದ ಎಲೆಗಳ ಪುಡಿಯನ್ನು ಹಲ್ಲುಗಳ ಆರೋಗ್ಯವನ್ನು ಕಾಪಾಡುವ ಸಲುವಾಗಿ ಟೂತ್ ಪೌಡರಿನಂತೆ, ತಲೆಹೊಟ್ಟಿನ ನಿವಾರಣೆಗೆ, ಮುಖದಲ್ಲಿನ ಮೊಡವೆಗಳು, ಗುಳ್ಳೆಗಳ ನಿವಾರಣೆಗೆ, ಹೃದಯ ರೋಗಗಳ ನಿವಾರಣೆಗೆ, ನೆಗಡಿ-ತಲೆನೋವಿನ ನಿವಾರಣೆಗೆ ಮುಂತಾದ ಖಾಯಿಲೆಗಳ ನಿವಾರಣೆಗೆ ಬಳಸಲಾಗುತ್ತದೆ. ಈ ರೀತಿ ಅತ್ಯುಪಯುಕ್ತವಾದ ತುಳಸಿಯನ್ನು ದೇವರೆಂದು ಭಾವಿಸಿ, ಮನೆಯ ಮುಂದೆ ಬೆಳೆಸುವುದು ಉಪಯುಕ್ತವೇ ಸರಿ.
4. ಕೊಳ್ಳಿ ದೆವ್ವಗಳಿರುವುದು ನಿಜವೇ?
ಖಂಡಿತ ಇದೊಂದು ಸುಳ್ಳು ಕಲ್ಪನೆ. ಸಾಮಾನ್ಯವಾಗಿ ಮಾನವನ ಮತ್ತು ಪ್ರಾಣಿಗಳ ಮೂಳೆಗಳಲ್ಲಿ ರಂಜಕದ ಅಂಶವಿರುತ್ತದೆ. ಈ ರಂಜಕ ವಾತಾವರಣಕ್ಕೆ ಪ್ರವೇಶಿಸಿದಾಗ ರಾಸಾಯನಿಕ ಕ್ರಿಯೆಯ ಮೂಲಕ ಬೆಂಕಿ ಹೊತ್ತಿಕೊಳ್ಳುತ್ತದೆ. ಇದು ಗಾಳಿ ಬೀಸುವ ದಿಕ್ಕಿಗೆ ಚಲಿಸುವುದರಿಂದ ಕೊಳ್ಳಿದೆವ್ವ ಹೋಗುತ್ತಿದೆ ಎಂಬ ಭ್ರಮೆ ಬಂದಿರುತ್ತದೆ.
5. ಅಶ್ವತ್ಠಕಟ್ಟೆ ಸುತ್ತುವುದು ಮೂಢನಂಬಿಕೆಯೇ?
ಅಶ್ವತ್ಥಕಟ್ಟೆಯಲ್ಲಿ ಸಾಮಾನ್ಯವಾಗಿ, ಅಶ್ವತ್ಥವೃಕ್ಷ, ಆಲದ ಮರ, ಬಿಲ್ವಪತ್ರೆ ವೃಕ್ಷ, ಬೇವಿನ ಮರ ಇವುಗಳನ್ನು ಪ್ರಮುಖವಾಗಿ ಕಾಣುತ್ತೇವೆ. ಇಲ್ಲಿನ ಪ್ರತಿಯೊಂದೂ ಮರವೂ ಸಹ ತಮ್ಮ ತೊಗಟೆ, ಬೇರು, ಎಲೆಗಳ ಮೂಲಕ ಆಯುರ್ವೇದದಲ್ಲಿ ಔಷಧಿಯಾಗಿ ಉಪಯೋಗಕಾರಿಯಾಗಿದೆ. ಬೆಳಗಿನಜಾವದ ತಂಪು ವಾತಾವರಣದಲ್ಲಿ ಇಂತಹ ಅಶ್ವತ್ಥಕಟ್ಟೆಯನ್ನು ಪ್ರದಕ್ಷಿಣೆ ಹಾಕುವುದರಿಂದ ಆ ಮರಗಳಲ್ಲಿನ ಔಷಧಿಯುಕ್ತ ಗಾಳಿಯನ್ನು ಸೇವಿಸುವ ಮೂಲಕ ನಮ್ಮ ಆರೋಗ್ಯ ಉತ್ತಮಗೊಳ್ಳುತ್ತದೆ. ಇದರಿಂದ ಇದನ್ನು ಮೂಢನಂಬಿಕೆಯೆಂದು ಅಲ್ಲಗೆಳೆಯದೆ ಅನುಸರಿಸುವುದು ಆರೋಗ್ಯಕ್ಕೆ ಉತ್ತಮ.
6. ಸ್ನಾನ ಮಾಡದೇ ಯಾವುದೇ ಕರ್ಮಗಳನ್ನು ಮಾಡಬಾರದೆಂದಿದೆ. ನಿಜವೇ?
ಒಂದು ರೀತಿಯಲ್ಲಿ ಹೌದು. ಏಕೆಂದರೆ ನಮ್ಮ ದೇಹದ ಚರ್ಮವು ತನ್ನಲ್ಲಿನ ಕೋಟ್ಯಾಂತರ ಕಣ್ಣಿಗೆ ಕಾಣದ ರಂದ್ರಗಳ ಮೂಲಕ ಉಸಿರಾಡುತ್ತಿರುತ್ತದೆ. ವಾತಾವರಣದಲ್ಲಿನ ಧೂಳು ಈ ರಂದ್ರಗಳನ್ನು ಮುಚ್ಚುವುದರಿಂದ ಚರ್ಮದ ಉಸಿರಾಟಕ್ಕೆ ಹಾಗೂ ಉಸಿರಾಟದಿಂದ ಉತ್ತೇಜಿತವಾಗುವ ರಕ್ತಪರಿಚಲನೆಗೆ ತೊಂದರೆ ಉಂಟಾಗುತ್ತದೆ. ಇದರಿಂದ ದೇಹಕ್ಕೆ ಆಲಸ್ಯ, ಸೋಮಾರಿತನ ಹಾಗೂ ವಿವಿಧ ಖಾಯಿಲೆಗಳಿಗೆ ಆಸ್ಪದ ಕೊಟ್ಟಂತಾಗುವುದರಿಂದ ನಮ್ಮ ದೇಹ ದೈಹಿಕ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ಯಾವುದೇ ಕೆಲಸಕಾರ್ಯಗಳನ್ನು ಮಾಡಸ್ಲೂ ಉತ್ಸಾಹವಿರುವುದಿಲ್ಲ ಹಾಗೂ ಇದರಿಂದ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದಿಲ್ಲ. ಆದ್ದರಿಂದ ಧಾರ್ಮಿಕವಾಗಿ ಏನೇ ಹೇಳಿದ್ದರೂ, ಆರೋಗ್ಯದ ದೃಷ್ಟಿಯಿಂದ ಸ್ನಾನ ಒಳ್ಳೆಯದು.
7. ಧೂಪ ಹಾಕುವುದು ಏಕೆ? ಇದು ಒಳ್ಳೆಯದೇ?
ಇದಕ್ಕೆ ಆದ್ಯಾತ್ಮಿಕ ಕಾರಣ ತಿಳಿದಿಲ್ಲವಾದರೂ ವೈಜ್ಞಾನಿಕವಾಗಿ ಅತ್ಯಂತ ಒಳ್ಳೆಯದು ಎಂದು ಹೇಳಬಹುದಾಗಿದೆ. ಏಕೆಂದರೆ ಧೂಪವನ್ನು ಸಾಮಾನ್ಯವಾಗಿ ಬೊರ್ದೆಲ್ಲಿಯ ಸೆರ್ರೆಟ (Boswellia Serrata) ಎಂಬ ಕರ್ನಾಟಕದ ಶುಷ್ಕ ವಾತಾವರಣದಲ್ಲಿ ಬೆಳೆಯುವ ಮರದ ಮೂಲಕ ಪಡೆಯಲಾಗುತ್ತದೆ. ಇದು ಕ್ಯಾನ್ಸರ್ ನಿರೋಧಕವಾಗಿದ್ಧು, ಮೂಳೆಗಳ ನೋವು ನಿವಾರಕವೂ
ಆಗಿದೆ. ಬ್ರೈನ್ ಟ್ಯೂಮರ್ ನ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಇದು ಅತ್ಯಂತ ಮುಖ್ಯವಾದ ಆಚರಣೆಯೆಂದೇ ಹೇಳಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಕೇವಲ ಹೆಗೆ ಹೆಚ್ಚಾಗಿ ಬರಲೆಂದೋ ಅಥವ ಉತ್ತಮ ವಾಸನೆ ಬರಲೆಂದೋ ಹಲವಾರು ರಾಸಾಯನಿಕಗಳನ್ನು ಬೆರೆಸುತ್ತಿದ್ದು, ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಆದರೆ ಹಿರಿಯರು ಮಾಡಿದ ಧೂಪ ಹಾಕುವ ಸಂಪ್ರದಾಯ ಮಾತ್ರ ಉತ್ತಮವೆಂದೇ ಹೇಳಬಹುದಾಗಿದೆ.
ಚಿತ್ರಕೃಪೆ : ವಿಕಿಪೀಡಿಯ
ಲೇಖಕರು : ಕೃಷ್ನಮೂರ್ತಿ.ಎಸ್
Subscribe to:
Posts (Atom)




